ಭಾರತೀಯ ಸಾಂಸ್ಕೃತಿಕ ಪರಿಷತ್ ಗೆ ಸ್ವಾಗತ…

ಅತ್ಯಂತ ಪ್ರಾಚೀನವಾದ ಮತ್ತು ಅನನ್ಯವಾದ ಸಾಮುದಾಯಿಕ ಹಿತತತ್ವಗಳ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪಡೆದಿರುವ ಒಂದು ಬೃಹತ್ ರಾಷ್ಟ್ರ ಭಾರತ. ಆದರೆ, ಕಾಲಘಟ್ಟದಲ್ಲಿ ನಡೆದ ದೀರ್ಘ ಪರಕೀಯ ಆಡಳಿತ, ಸ್ವಾತಂತ್ರ್ಯಾನಂತರದ ರಾಜಕೀಯ ವ್ಯವಸ್ಥೆ ಮತ್ತು ಪ್ರಸ್ತುತ ಜಾಗತೀಕರಣದ ಬಿರುಗಾಳಿ – ಇವುಗಳ ಪ್ರಭಾವದಿಂದಾಗಿ ನಮ್ಮ ದೇಶವು ತನ್ನ ಸಹಜ ಸಂಸ್ಕೃತಿಗೆ ಎರವಾಗಿ, ನೈತಿಕ ಅವನತಿಯ ಧಾಳಿಗೆ ತುತ್ತಾಗಿ ತತ್ತರಿಸಿದೆ.

ಭಾರತೀಯ ಪರಂಪರಾಗತ ಬದುಕಿನಲ್ಲಿ ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆಗಳಲ್ಲಿ ಸ್ಮರಣೀಯ ಪಾತ್ರ ವಹಿಸಿಕೊಂಡು ಬಂದಿರುವ ನಮ್ಮ ದೇಶದ ನಾನಾ ಮತ-ಪಂಥಗಳು, ಧಾರ್ಮಿಕ ಕೇಂದ್ರಗಳು ಮತ್ತು ಧರ್ಮಗುರುಗಳು ಈ ಸಾಂಸ್ಕೃತಿಕ ಸಂವರ್ಧನೆಯ ಮಹಾಮಣಿಹವನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಜನಸಮುದಾಯದಲ್ಲಿ, ಅದರಲ್ಲೂ ಯುವಜನಾಂಗದಲ್ಲಿ, ಭಾರತೀಯ ಸಂಸ್ಕೃತಿಯ ಬಗೆಗೆ ಸ್ಪಷ್ಟವಾದ ಅರಿವು, ರಾಷ್ಟ್ರನಿಷ್ಠೆ, ಮತ್ತು ಸಾಮಾಜಿಕ ಹೊಣೆಗಾರಿಕೆಯ ಪ್ರಜ್ಞೆಯನ್ನು ಜಾಗೃತಗೊಳಿಸಬೇಕಾಗಿದೆ. ಭಾರತೀಯರ ಬದುಕಿನಲ್ಲಿ ಸೌಹಾರ್ದ ಮತ್ತು ಸಾಮರಸ್ಯಗಳ ಹಿತಕರ ವಾತಾವರಣವನ್ನು ಉಂಟುಮಾಡಬೇಕಾಗಿದೆ.

ಈ ಹಿನ್ನೆಲೆಯಲ್ಲಿ, ಉನ್ನತ ಧ್ಯೇಯಾದರ್ಶಗಳೊಂದಿಗೆ ದೇಶದ ಸಾಂಸ್ಕೃತಿಕ ಘನತೆ-ಗೌರವಗಳ ರಕ್ಷಣೆಗಾಗಿ ಅರ್ಪಣಾಭಾವದಿಂದ ಯೋಜಿತ ಮತ್ತು ವಿಸ್ತೃತ ಸೇವಾಕಾರ್ಯಗಳನ್ನು ಕೈಗೊಳ್ಳುವಂತಹ ಒಂದು ರಾಷ್ಟ್ರೀಯ ಸಂಘಟನೆಯ ಅಗತ್ಯವಿದೆ. ಆ ದಿಸೆಯ ಚಿಂತನೆಯ ಫಲವೇ ’ಭಾರತೀಯ ಸಾಂಸ್ಕೃತಿಕ ಪರಿಷತ್ತು

Contact Address

Bharatiya Samskrutika Parishat
JSS College Campus
1st Main Road, 38th Cross, 8th Block,
Jayanagar, Bengaluru – 560 070

Co-ordinator : Shri Rudramuni Swamiji (Alamatti)
Mobile: +91 93411 31811
E-mail : bsparishat@gmail.com